President ಶ್ರೀ ರಾಮ್ ನಾಥ್ ಕೊವಿಂದ್
ಗೌರವಾನ್ವಿತ ರಾಷ್ಟ್ರಪತಿಗಳು ಮತ್ತು ವಿಜಿಟರ್
Chancellor ಪ್ರೊ. ಎನ್. ಆರ್. ಶೆಟ್ಟಿ
ಕುಲಾಧಿಪತಿಗಳು
VC ಪ್ರೊ. ಹೆಚ್. ಎಂ. ಮಹೇಶ್ವರಯ್ಯ
ಕುಲಪತಿಗಳು
Pro Vice-Chancellor ಪ್ರೊ. ಜಿ.ಆರ್. ನಾಯಕ್
ಸಮಕುಲಪತಿಗಳು
Welcome to Central University of Karnataka         Vice Chancellors Meet at Rashtrapati Bhavan Held on 6th January, 2018. CUK Signs MOU with IIT Hyderabad for Mentorship to School of Engineering


ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (CUK) ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಾಮಾಜಿಕ ಪ್ರಸ್ತುತತೆಗೆ ಬದ್ದವಾದ ಯುವ ಸಂಸ್ಥೆಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆ ಮತ್ತು ಅಗತ್ಯತೆಗಳಿಗೆ ತಕ್ಕಂತೆ ಅದನ್ನು ಸಾಬೀತುಪಡಿಸಿದೆ. ಹಾಗೆಯೇ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ, ಶೈಕ್ಷಣಿಕ ಪ್ರಗತಿಯಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಅಸ್ಮಿತೆಯನ್ನು ಕಂಡುಕೊಳ್ಳುವಲ್ಲಿ ವಿದ್ವಾಂಸರ ಕೊಡುಗೆಗಳಿಂದ ಗಮನಾರ್ಹ ಸಾಧನೆ ಮಾಡಲಾಗಿದೆ. ಶಿಸ್ತು ಮತ್ತು ಬದ್ಧತೆಯುಳ್ಳ ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಇತರ ಪ್ರತಿಭೆಗಳಿಂದ ಇದರ ಸಾಧನೆ ಸಾಧ್ಯವಾಗಿದೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಭೌಗೋಳಿಕವಾಗಿ ಹಿಂದುಳಿದ ಮತ್ತು ಸಾಂಸ್ಕೃತಿಕವಾಗಿ ವಿವಿಧ ಸಂಸ್ಕೃತಿಯ ಪ್ರದೇಶವಾದ ಕಲಬುರಗಿಯಲ್ಲಿ ಸ್ಥಾಪನೆಯಾಗಿದೆ. ಐತಿಹಾಸಿಕವಾಗಿ ಇದು ಬುದ್ಧಿಜೀವಿಗಳ ಮತ್ತು ಕ್ರಾಂತಿಕಾರಿ ನಾಯಕರ ಪ್ರದೇಶವಾಗಿದೆ. ಇದು ಅಂಥ ಚೈತನ್ಯವನ್ನು ಉಳಿಸಿಕೊಳ್ಳಲು ಮತ್ತು ವಿಶ್ವವಿದ್ಯಾಲಯವನ್ನು ಜ್ಞಾನದ ತೊಟ್ಟಿಲನ್ನಾಗಿಸಲು ಪ್ರಭಾವಿಸುವುದೇ ಅಲ್ಲದೆ ಮಾನವೀಯತೆ, ಕಲೆ, ವಾಣಿಜ್ಯ, ವ್ಯವಹಾರ ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನಗಳಂತಹ ಕ್ಷೇತ್ರಗಳನ್ನು ವಿಶ್ವವ್ಯಾಪಿಯಾಗಿ ಮಾಡಲು ಪ್ರೇರೇಪಿಸುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಜ್ಞಾನದ ಸೃಷ್ಟಿ, ಸಮೀಕರಣ, ಪ್ರಸಾರ ಹಾಗೂ ಅವನ್ನು ಸಾಮಾಜಿಕರಣಗೊಳಿಸುವಲ್ಲಿ ವಿಶೇಷವಾದ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ.

ಮಳೆನೀರಿನ ಸಂಗ್ರಹಣೆ, ಸೌರ ವಿದ್ಯುತ್ ಉತ್ಪಾದನೆ ಮತ್ತು ದಕ್ಷ ಸಂಪನ್ಮೂಲಗಳ ನಿರ್ವಹಣೆಯಂತಹ ಸೂಕ್ತ ಪರಿಹಾರಗಳ ಮೂಲಕ ಇಲ್ಲಿನ ನೀರಿನ ಅಭಾವವನ್ನೂ ಅಗತ್ಯ ಕುಂದು ಕೊರತೆಗಳನ್ನು ಬಗೆಹರಿಸಲು ವಿಶ್ವವಿದ್ಯಾಲಯವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂದು ವಿಶ್ವವಿದ್ಯಾಲಯದ ಆವರಣವು ತನ್ನಿಂತಾನೇ ಅದರ ಅಗತ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ನೆಲೆಯಾಗಿದೆ. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಒಂಬತ್ತು ನಿಕಾಯಗಳಿದ್ದು, ಅವುಗಳಡಿಯಲ್ಲಿ ಇಪ್ಪತ್ತೊಂದು ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.

2018ರ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕೋರ್ಸ್ಗಳ ಪ್ರವೇಶಾತಿಗಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಸಿಯುಸಿಇಟಿಯ ಭಾಗವಾಗಿ ಕೆಲಸ ಮಾಡಿದ್ದು ನನಗೆ ಸಂತೋಷವೆನಿಸುತ್ತಿದೆ.

ತ್ವರಿತಗತಿಯ ಜ್ಞಾನ ಯುಗದಲ್ಲಿ, ವಿಶ್ವವಿದ್ಯಾಲಯವು ನುರಿತ, ಪರಿಣಾಮಕಾರಿ ಹಾಗೂ ಸಾಮಾಜಿಕ ಬದ್ಧತೆಯ ಮಾನವಶಕ್ತಿಯನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ಕೈ ಜೋಡಿಸುವ ಅರ್ಹ ವಿದ್ವಾಂಸರನ್ನೂ ಮತ್ತು ಪಾಲುದಾರರನ್ನು ಅನ್ವೇಷಿಸುತ್ತಿದ್ದೇವೆ ಹಾಗೂ ಕಲಿಕೆಯ ಈ ಮಹತ್ತರ ಪ್ರದೇಶಕ್ಕೆ ಜ್ಞಾನ ಸೃಷ್ಟಿಗಾಗಿ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ.

ಈ ವಿಶ್ವವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂತೋಷ ಮತ್ತು ಸಾರ್ಥಕ ರೀತಿಯ ಅರ್ಥಪೂರ್ಣ ಕ್ಷಣಗಳು ಎದುರಾಗಲಿ ಎಂದು ಪ್ರಾಮಾಣಿಕವಾಗಿ ಕೋರುತ್ತೇನೆ.

ಪ್ರೊ. ಎಚ್.ಎಂ. ಮಹೇಶ್ವರಯ್ಯ

Integrated Programs :

English (BA & MA), Economics (BA & MA), Geography (B Sc & M Sc), Geology (B Sc & M Sc), Psychology (B Sc & M Sc), Engineering (B Tech & M Tech), Science (B Sc & M Sc).

Standalone program :

BBA.

Masters Degree Programs :

MA English, MA Hindi, MA Kannada,MA History, MA Linguistics, MA Folkloristic and Tribal Studies, MA Economics, MSW, MBA, MCA, M Com, M Sc Psychology, M Sc Applied Geography & Geoinformatics, M Sc Applied Geology & Geoinformatics, M Sc Mathematics, M Sc Physics & M Sc Chemistry.

Research (PhD) Programs :

Hindi, Kannada,Linguistics, Economics, Social Work, Management, Commerce, Psychology, Mathematics, Physics and Chemistry

TVCs and Radio Jingles for SWAYAM